Menu
News Details

ತುಳುನಾಡಿನ ಕಲಾವಿದರ ಬದುಕಿಗೆ ಆಸರೆಯ ಹಸ್ತವಾದ ತುಳು ಕೂಟಾ ಕುವೈತ್ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕೊಡುಗೈ ದಾನಿಗಳು

ತುಳುನಾಡಿನ ಕಲಾವಿದರ ಬದುಕಿಗೆ ಆಸರೆಯ ಹಸ್ತವಾದ ತುಳು ಕೂಟಾ ಕುವೈತ್ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕೊಡುಗೈ ದಾನಿಗಳು

ಕೋವಿಡ್-19 , ಕೊರೊನ ಮಹಾಮಾರಿಗೆ ಸಿಲುಕಿ ಜಗತ್ತು ತತ್ತರಿಸುತ್ತಿರುವ ಈ ಕಾಲದಲ್ಲಿ ಭಾರತವು ಲಾಕ್ ಡೌನ್ ಆಗಿದೆ . ಈ ಸಂದರ್ಭದಲ್ಲಿ ಕರ್ನಾಟಕದ ಅದರಲ್ಲೂ ತುಳುನಾಡಿನ ಎಲ್ಲಾ ಕಲಾವಿದರು ಈ ನಾಲ್ಕು ತಿಂಗಳಲ್ಲಿ ತಮ್ಮ ಕಲೆಯಿಂದ ಸಂಪಾದನೆ ಮಾಡಿರುವುದರಲ್ಲಿ ವರ್ಷಪೂರ್ತಿ ತಮ್ಮ ಸಂಸಾರ ನಡೆಸಿಕೊಂಡು ಗೌರವದಿಂದ ದಿನ ಸಾಗಿಸುತ್ತಿದ್ದವರು ಈಗ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ .

ಈ ಸಂದರ್ಭದಲ್ಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯ ಕೊಡುಗೈ ದಾನಿಗಳ ಸಹಕಾರದಲ್ಲಿ ಸುಮಾರು 1500 ಜೀವನಾವಶ್ಯಕ ಕಿಟ್ ಗಳನ್ನು, ಆಯ್ಕೆ ಮಾಡಿದ ಸಂತ್ರಸ್ಥ ಕಲಾವಿದರಿಗೆ ನೀಡುವ ಈ ಒಳ್ಳೆ ಕೆಲಸಕ್ಕೆ ಸಹಾಯ ಧನವನ್ನು ನೀಡಿ ಅಕಾಡೆಮಿಗೆ ಸಹಕಾರ ಕೊಟ್ಟು , ಕಲಾವಿದರ ಬದುಕಿಗೆ ಆಸರೆಯ ಹಸ್ತವಾದ ತುಳು ಕೂಟಾ ಕುವೈತ್.