Menu
News Details

"ಸಂಕಷ್ಟದಲ್ಲಿ ನಮ್ಮವರು "

"ಸಂಕಷ್ಟದಲ್ಲಿ ನಮ್ಮವರು",

ಕುವೈಟ್ ನಲ್ಲಿ ನೆಲೆಸಿರುವ ಕನ್ನಡಿಗರು ಕೋವಿಡ್-19 ಮಹಾಮಾರಿಯಿಂದ ಸಂಕಷ್ಟವನ್ನು ಎದಿರುಸಿತ್ತಿರುವ ಪರಿಸ್ಥಿತಿಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ನಮ್ಮ ಕುಡ್ಲ ವಾಹಿನಿಯು " ಸಂಕಷ್ಟದಲ್ಲಿ ನಮ್ಮವರು " ಎಂಬ ನೇರ ಪ್ರಸಾರದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಯುವ ನಿರೂಪಕ ಶ್ರೀ ನಿತಿನ್ ಬಿ ಸಾಲ್ಯಾನ್ ನಿರೂಪಣೆಯಲ್ಲಿ ಮೂಡಿ ಬಂದ ಈ ಕಾರ್ಯಕ್ರಮದಲ್ಲಿ ಕುವೈಟ್ ನ ಕನ್ನಡಿಗರ ಪರವಾಗಿ ತುಳುಕೂಟ ಕುವೈಟ್ ನ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ರಮೇಶ್ ಎಸ್ ಭಂಡಾರಿ ಮತ್ತು ಅನಿವಾಸಿ ಭಾರತೀಯ ಪ್ರವಾಸಿ ಪರಿಷತ್ ನ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ರಾಜ್ ಭಂಡಾರಿ ಯವರು ಮಾತನಾಡಿದರು.

ಶ್ರೀ ರಮೇಶ್ ಎಸ್ ಭಂಡಾರಿ ಯವರು ಪ್ರಸ್ತುತ ಕುವೈಟ್ ನಲ್ಲಿ ಸುಮಾರು 11 ಲಕ್ಷ ಅನಿವಾಸಿ ಭಾರತೀಯರಿದ್ದು ಕೆಲ ದಿನಗಳಿಂದ ದಿನಕ್ಕೆ 700 ರಿಂದ ಸರಿ ಸುಮಾರು 1000 ದ ತನಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಅದರಲ್ಲಿ ಭಾರತೀಯರ ಸಂಖ್ಯೆ ಅಧಿಕವಿದೆ ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್-19 ಗೆ ತುತ್ತಾಗಿರುವುದರಲ್ಲಿ ಭಾರತೀಯರ ಸಂಖ್ಯೆ ಅಧಿಕವಾಗುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು।ಹಾಗೆ ಮೊದಲಿನಿಂದಲೂ ಕುವೈಟ್ ಸರ್ಕಾರ ಈ ಮಹಾಮಾರಿಯ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಮತ್ತು ಗುಣಮುಖರಾಗುವವರ ಸಂಖ್ಯೆ ಕೂಡ ದಿನದಿದಿಂದ ದಿನಕ್ಕೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಕುವೈಟ್ ಸರ್ಕಾರ ಈ ನಿಟ್ಟಿನಿಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಇದೆ ಸಂದರ್ಭದಲ್ಲಿ ಇತ್ತೀಚಿಗೆ ದುಬೈ ರಾಷ್ಟ್ರದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಮ್ಮ ತವರು ನೆಲಕ್ಕೆ ಬಂದಿಳಿದ ಅನಿವಾಸಿ ಭಾರತೀಯರನ್ನು ಸ್ಥಳೀಯರು ಬಹಳ ಕನಿಷ್ಟರೀತಿಯಲ್ಲಿ ನಡೆಸುಕೊಂಡಿರುವ ಸಂಗತಿಯ ಬಗ್ಗೆ ನಿರೂಪಕ ಶ್ರೀ ನಿತಿನ್ ಬಿ ಸಾಲ್ಯಾನ್ ಬೇಸರವನ್ನು ವ್ಯಕ್ತಪಡಿಸಿದರು ಹಾಗು ಈ ಘಟನೆಯ ಬಗ್ಗೆ ಅಭಿಪ್ರಾಯ ಕೇಳಿದರು.

ಈ ಘಟನೆಗೆ ಪ್ರತಿಕ್ರಯಿಸಿದ ಶ್ರೀ ರಮೇಶ್ ಎಸ್ ಭಂಡಾರಿಯವರು , ಇತ್ತೀಚಿನ ಇಂತಹ ಘಟನೆಗಳು ಬಹಳ ಬೇಸರ ತಂದಿದ್ದು ಇದು ಒಳ್ಳೆಯ ಬೆಳವಣಿಗೆ ಅಲ್ಲ ಮತ್ತುತುಳುನಾಡಿಗೆ ಮತ್ತು ತುಳುವರಿಗೆ ಇದು ಶೋಭೆ ತರುವಂತಹುದಲ್ಲ ಎಂದು ಅಭಿಪ್ರಾಯ ಪಟ್ಟರು. ಹೊರ ದೇಶಗಳಿಂದ ಬರುವವರು ತಮ್ಮ ಕುಟುಂಬವನ್ನೆಲ ಬಿಟ್ಟು ದೂರದಲ್ಲಿರುವರು ಈ ಕಷ್ಟದ ಸಮಯದಲ್ಲಿ ತನ್ನವರೊಂದಿಗೆ ಇರಬೇಕೆಂದು ಬಯಸುವರು ಇದರಿಂದ ಅವರ ಮಾನಸಿಕ ಸ್ಥೈರ್ಯವು ಹೆಚ್ಚುತ್ತದೆ ಹಾಗು ಬರುವವರು ಯಾರು ಸಹ ಸೋಂಕಿತರಲ್ಲ ಪ್ರತಿಯೊಬ್ಬರು ಆರೋಗ್ಯವಾಗಿದ್ದು ಎಲ್ಲ ತರಹದ ವೈದ್ಯಕೀಯ ಪರೀಕ್ಷೆಗಳ ನಂತರವೇ ಪ್ರಯಾಣ ಬೆಳಸಿ ಬಂದಿರುತ್ತಾರೆ ಹಾಗು ಬಂದ ನಂತರ ಕೂಡ ಸರ್ಕಾರದ ನಿಯಮಾನುಸಾರ ಗೃಹಬಂಧನದಲ್ಲಿರುತ್ತಾರೆ ದಯಮಾಡಿ ನಮ್ಮ ಜನರು ಇದನ್ನು ಅರ್ಥಮಾಡಿಕೊಂಡು ಸಹಕರಿಸಬೇಕು ಮತ್ತು ಜನ ನಾಯಕರು ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ವಿನಂತಿಸಿಕೊಂಡರು. ನೇರ ಪ್ರಸಾರದ ವೇಳೆ ಹಲವಾರು ಜನರು ಕರೆ ಮಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ನಡೆದ ಕಹಿ ಘಟನೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದರು ಮತ್ತು ಕುವೈಟ್ ನ ಅನಿವಾಸಿ ಕನ್ನಡಿಗರು ಸಹ ಕರೆ ಮಾಡಿ ಆದಷ್ಟು ಬೇಗ ವಿಮಾನಯಾನಕ್ಕೆ ವ್ಯವಸ್ಥೆ ಮಾಡಿಕೊಡಬೇಕಾಗಿ ಕೇಳಿ ವಿನಂತಿಸಿದರು. ಇದಕ್ಕೆ ಉತ್ತರಿಸಿದ ಶ್ರೀ ರಮೇಶ್ ಎಸ್ ಭಂಡಾರಿ ಯವರು , ಈ ವಿಷಯದ ಬಗ್ಗೆ ಈಗಾಗಲೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರ ಜೊತೆ ಚರ್ಚಿಸಿದ್ದು ಇತರೆ ಜನ ನಾಯಕರಿಗೂ ಕೂಡ ಮನವಿ ಮಾಡಲಾಗಿದೆ ಎಂದರು ಹಾಗು ನಮ್ಮ ಮನವಿಗೆ ಮಾನ್ಯ ಮುಖ್ಯಮಂತ್ರಿಗಳು ತಕ್ಷಣವೇ ಸ್ಪಂದಿಸಿದ್ದು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟುಬೇಗ ವಿಮಾನಯಾನದ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ತುಳುಕೂಟ ಕುವೈಟ್ ಹಾಗು ಇತರೆ ಕನ್ನಡಿಗರ ಅನೇಕ ಸಂಘಟನೆಗಳು ಕೋವಿಡ್-೧೯ ಗೆ ಸಿಲುಕಿ ಸಂಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟು ಮಟ್ಟಿಗೆ ಆಹಾರದ ವ್ಯವಸ್ಥೆ , ಅವಶ್ಯ ಔಷಧಿಗಳ ವ್ಯವಸ್ಥೆ ಮಾಡಲಾಗುತ್ತಿದೆ ಮತ್ತು ಇತರೆ ಸಹಕಾರವನ್ನು ನೀಡುತ್ತಿದೆ ಎಂದು ತಿಳಿಸಿದರು. ತವರು ನೆಲಕ್ಕೆ ಬಂದವರನ್ನು ಪ್ರೀತಿಯಿಂದ ಸ್ವಾಗತಿಸಿ ಮತ್ತು ಅವರಿಗೆ ಆತ್ಮ ವಿಶ್ವಾಸ ನೀಡಿ ಎಂದು ನಾಡಿನ ಜನರಲ್ಲಿ ಶ್ರೀ ರಮೇಶ್ ಎಸ್ ಭಂಡಾರಿ ವಿನಂತಿಸಿಕೊಂಡರು ಮತ್ತು ಎಲ್ಲರು ಒಗ್ಗಟ್ಟಾಗಿ ಈ ಕೋವಿಡ್ -19 ಮಹಾಮಾರಿಯನ್ನು ಓಡಿಸುವಲ್ಲಿ ಜೊತೆಯಾಗೋಣ ಎಂದು ಕರೆ ನೀಡಿದರು ಮತ್ತು ತುಳುಕೂಟ ಕುವೈಟ್ ಮತ್ತು ಕುವೈಟ್ ಕನ್ನಡಿಗರ ಪರವಾಗಿ ನಮ್ಮ ಕುಡ್ಲ ವಾಹಿನಿಯ ಬೆಂಬಲ ಮತ್ತು ಸಹಕಾರಕ್ಕೆ ಧನ್ಯವಾದವನ್ನು ಸಮರ್ಪಿಸಿದರು.

ನಮ್ಮ ಕುಡ್ಲ ವಾಹಿನಿಯಲ್ಲಿ ಪ್ರಸಾರವಾದ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಎಲ್ಲರು ಸಹ ಸಹಕಾರ ಮತ್ತು ಬೆಂಬಲವನ್ನು ನೀಡಿದ್ದಾರೆ ಮತ್ತು ತುಳುಕೂಟ ಕುವೈಟ್ ಮತ್ತು ಅನಿವಾಸಿ ಭಾರತೀಯ ಪ್ರವಾಸಿ ಪರಿಷತ್ ಈ ಸಂದರ್ಭದಲ್ಲಿ ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿದರು .

Click here to watch the video